ಅವಳು ಚಲನಚಿತ್ರದ ಬಗ್ಗೆ

ಆಲ್ ಇಂಡಿಯಾ ಕೊಲಾಬ್ರೆಟಿವ್ ಸಿನಿ ಮೇಕರ್ಸ್ ಫಿಲಂ ಬೋರ್ಡ್ ಕೌನ್ಸಿಲ್ ಟ್ರಸ್ಟ್ ಹಾಗೂ ಕಾರಭಾರಿ ಮೊಷನ್ಸ್ ಕೋ ಆಪರೇಟಿವ್ ಫಿಲಂ ಚೇಂಬರ್ ಅಸೋಷಿಯೇಶನ್ ಅಡಿಯಲ್ಲಿ ಕಾರಭಾರಿ ಫಿಲಂಸ್ ಹಾಗೂ ಕಾರಭಾರಿ ಸಿನಿ ಮೇಕರ್ಸ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ನಿರ್ಮಾಣಗೊಂಡ ಅವಳು ಪಂಚ ಕನ್ಯೆಯುರ ಪಂಚ ಕಥೆ.

ಚಿತ್ರದ ಚಿತ್ರಿಕಗರಗೊಂಡು ಪೋಸ್ಟ್ ಪ್ರೊಡಕ್ಷನ್ ನಲ್ಲಿದೆ

“ಅವಳು ”

ಕನ್ನಡ ಭಾಷೆಯಲ್ಲಿ ಚಿತ್ರ ನಿರ್ಮಾಣ ಬಂಡವಾಳ ಹೂಡಿಕೆ ಚಾರ್ಟ್

1,80,00,000/-

ಕ್ರಮಶೇರುದಾರರುತಲಾ ಶೇರು ಒಟ್ಟು ಶೇರು ಒಟ್ಟು ಮೊತ್ತ ಶೇರು ಲಾಭಗಳು
 ಒಟ್ಟು ಶೇರು7200/-25001,80,000ಚಿತ್ರದ ಗಳಿಕೆಯನ್ನೂ ಸಹ 2500 ಭಾಗಗಳಾಗಿ ವಿಂಗಡಿಸಲಾಗುವುದು  ಅಂದಾಜು PROFIT AMOUNT DISTRUBUTION (Example) As invested amount is calculated as CAPITAL % 2500 Points Profit also will be calculated as PROFITE % 2500 Points INVESTMENT (1,80, 00,000/- Rs Investment % 2500 Share Divide = 7200/- Rs Investment) PROFIT (05,80,00,000/- Rs Profit % 1000 Share Holders = 23200/- Rs Profit)  
 1,80,000
 ಸಾರ್ವಜನಿಕ ಶೇರುದಾರರು ಶೇರುಸಂಖ್ಯೆ ಶೇರು ಮೊತ್ತ ಒಟ್ಟು ಮೊತ್ತ
1ಯಲ್ಲಪ್ಪ ಮಾಕಾಪುಉರ 1179,200/-79,200/-
2ಸಮಿರಖಾನ ಪಠಾಣ0857,600/-57,600/-
3ದೇವಿದಾಸ ಪವಾರ (ದೇವಜಿ ಪವಾರ 0428,800/-28,800/-
4ಅಶೋಕ ಎಂ ಕಾಳೆ0428,800/-28,800/-
5ಹೇಮಲತಾ ಟಿ (ಹೇಮಾ)0428,800/-28,800/-
6ರಾಹಿನ್ ಅರುಣ ಬೆಳಧಡಿ (ರಾಹಿನ್ ಇಮ್ರಾನ್ ಶೇಖ್)0428,800/-28,800/-
 ಒಟ್ಟು ಮಾರಾಟವಾದ ಸಾರ್ವಜನಿಕ ಶೇರುಗಳು352,52,000/-2,52,000/-
ನಿರ್ಮಾಪಕ ಶೇರುಗಳು
ಒಟ್ಟು 2500 ಶೇರುಗಳಲ್ಲಿ ಮಾರಾಟವಾದ 35 ಶೇರುಗಳನ್ನು ಹೊರತುಪಡಿಸಿ ಉಳಿದ 2465 ಶೇರುಗಳು ನಿರ್ಮಾಪಕರದ್ದು ಆಗಿರುತ್ತದೆ
ವಿ ಸೂ : ಚಿತ್ರ ನಿರ್ಮಾಪಕರ ಹೆಸರಿನಲ್ಲಿ ಉಳಿದುಕೊಂಡಿರುವ  ಶೇರುಗಳು ಮಾರಟಕ್ಕೆ ಇಡಲಾಗಿದೆ, ನಿರ್ಮಾಪಕರ ಹೆಸರಿನಲ್ಲಿ 1001 ಶೇರುಗಳನ್ನು ಕಾಯ್ದಿರಿಸಿ ಉಳಿದ ಶೇರುಗಳನ್ನು ಮಾರಾಟ ಮಾಡಬಹುದಾಗಿದೆ 
ಅವಳು ಚಿತ್ರ ಕನ್ನಡದಲ್ಲಿ ನಿರ್ಮಾಣಗೊಂಡಿದ್ದು ಸದರಿ ವಿವರಣೆಯು ಕನ್ನಡದಲ್ಲಿ ನಿರ್ಮಾಣಗೊಂಡ ಅವಳು ಚಿತ್ರಕ್ಕೆ ಮಾತ್ರ ಸಿಮಿತವಾಗಿದ್ದು ಉಳಿದ ಭಾಷೆಗಳಲ್ಲಿ ಚಿತ್ರವನ್ನು ಡಬ್ ಮಾಡಲು ಪ್ರತ್ಯೇಕ ಲೆಕ್ಕ ಶೀರ್ಷಿಕೆ ಹಾಗೂ ಪ್ರತ್ಯೇಕ ಶೇರು ಪಟ್ಟಿ ರಚಿಸಲು ನಿರ್ಮಾಪಕರ ಹೆಸರಲ್ಲಿ ಹಕ್ಕು ಕಾಯ್ದಿರಿಸಲಾಗಿದೆ.

ಅವಳು ಚಿತ್ರದ ಶೇರುದಾರರಿಗೆ ನೀಡಿದ ಶೇರು ಒಪ್ಪಂದ ಪತ್ರದ ಸ್ಯಾಂಪಲ್

ಅವಳು ಚಿತ್ರದ ಬಗ್ಗೆ

ಕಥೆ / ಚಿತ್ರಕಥೆ / ಸಂಭಾಷಣೆ / ನಿರ್ದೇಶನ  

ಶ್ರೀಮತಿ ಮೇರಿ ರಾದೇ ಕಾರಭಾರಿ

ಚಿತ್ರಕಥೆಯ ಕುರಿತು

            ಸಾಮಾಜಿಕ ಭಾರತದಲ್ಲಿ ಹೆಣ್ಣಿನ ಹಕ್ಕು ಕೇವಲ ಪುಸ್ತಕಗಳಲ್ಲಿ ಮಾತ್ರ ನೋಡಲು ಸಾದ್ಯ ಮಹಿಳೆ ನಿಜಜೀವನದಲ್ಲಿ ಈ ನೀಚ ಸಮಾಜದ ವಕ್ರ ದೃಷ್ಟಿಗೆ ಬಲಿಯಾದದ್ದೇ ಹೆಚ್ಚು. ಮಹಿಳಾ ಸ್ವತಂತ್ರ, ಮಹಿಳಾ ಹಕ್ಕು ಇತ್ಯಾದಿ ಇತ್ಯಾದಿಯಾಗಿ ಸಾಕಷ್ಟು ಪುಸ್ತಕಗಳು ಕಥೆಗಳು ನಮ್ಮಲ್ಲಿದ್ದರು ಒಬ್ಬ ಸಾಮಾನ್ಯ ಮಹಿಳೆ ಇಂತಹ ಪುಸ್ತಕಗಳ ವಿಷಯದಿಂದ ಭಯಂಕರ ದೂರವಾಗಿದ್ದಾಳೆ ಕಾರಣ ಆ ಪುಸ್ತಕಗಳ ಅಸಲಿಯತ್ತಿನ ಮೇಲೆ ಮಹಿಳೆಗೆ ಸಂಶಯ… ಕಾರಣ ಅವಳು ಈ ಸಮಾಜದಲ್ಲಿ ಬದುಕುತ್ತಿರುವ ಮಹಿಳೆ

            ಮಹಿಳಾ ಸಮಾನತೆ ಮತ್ತು ಶಿಕ್ಷಣದ ಬಗ್ಗೆ ಹೋರಾಡಿ ಮಹಿಳೆಗೆ ನ್ಯಾಯ ದೊರಕಿಸಿದ ಮಾತೆ ಜ್ಯೋತಿಬಾಯ್ ಪುಲೆ ರವರಿಂದ ಹಿಡಿದು ವೈರಿಗಳ ರುಂಡ ಚಂಡಾಡಿದ ವಿರ ಮಾತೆ ರಾಣಿ ಚೆನ್ನಮ್ಮಜಿ ರವರ ವರೆಗೂ ಅವಲೋಕಿಸಿದರೂ ಅಂದ ಅನಾಥರ ಆಸರೆಯಾದ ಮದರ್ ತೆರೇಸಾ ರಿಂದ ಹಿಡಿದು ಆಟದ ಅಂಗಳದಲ್ಲಿ ಪದಕ ಗೆದ್ದ ಸಾನಿಯಾ ಮಿರ್ಜಾ ರ ವರೆಗೂ ಹುಡುಕಾಡಿ ತದಾಕಾಡಿ ನೋಡಿದರೂ ಸಾಧಿಸಿದ ಮಹಿಳೆಯರು ಎಷ್ಟೋ ಆದರೆ ಪುರುಷ ಸಮಾಜದ ಪೌರುಷಕ್ಕೆ ಬಲಿಯಾಗಿ ನರಳಾಡುತ್ತಿರುವ “ಅವಳು” ಇನ್ನೆಷ್ಟು ಎಂಬುದು  ಅಂಕಿ ಸಂಖ್ಯೆಗೂ ಸಿಗದವಳು.

            ಸಮಾಜದಲ್ಲಿ ಬೆರೆತು ಸಮಾನತೆಯನ್ನೂ ಕಾಣದೆ ಬದುಕಲು ಹೋರಾಡುವ ಐದು ಜನ ಮಹಿಳೆಯರ ಕೌಟುಂಬಿಕ ಕಥೆಯೇ “ಅವಳು”

  • 1 ನಾಯಕಿ
  • ವೈಶ್ಯೆ : ಪ್ರಧಾನ ನಾಯಕಿ

       ತನ್ನನ್ನು ಅತಿ ಹೆಚ್ಚಾಗಿ ಪ್ರೀತಿಸುವ ಗಂಡನ ಸಾವಿನಿಂದ ಒಮ್ಮಿಂದೊಮ್ಮೆ ಸಂಪೂರ್ಣ ಆಸರೆಯನ್ನು ಕಳೆದುಕೊಂಡ “ಅವಳು” ಗಂಡನ ನೆನಪಿನಲ್ಲಿ ತನ್ನ ಪ್ರೀತಿಯ ಸಂಕೇತವಾದ ತನ್ನ ಕರುಳಿನ ಕುಡಿಯನ್ನು ಸಲುಹಲು ಪಡುವ ಪಾಡು ಅತ್ಯಂತ ಘೋರವಾದದ್ದು. ಗೃಹಿಣಿಯಾಗಿದ್ದ “ಅವಳು” ಈಗ ಕೆಲಸ ಹುಡುಕುವ ಪ್ರಯತ್ನ ಮಾಡುತ್ತಾಳೆ, ಆದರೆ ಈ ಕಾಮುಖ ಸಮಾಜ ಅವಳಿಗೆ ಕೆಲಸ ನಿಡುವ ಬದಲು ಅವಳ ಸೌಂದರ್ಯವನ್ನು ಸವಿಯಲು ಆತುರ ಪಡುವ ಈ ದುಷ್ಟ ಸಮಾಜದ ಶಿಷ್ಟ ಸೋಗಿನ ಮನುಷ್ಯರು “ಅವಳ” ಜೀವನವನ್ನೇ ನಾಶ ಮಾಡುತ್ತಾರೆ.

          ಕೆಲಸದ ಹುಡುಕಾಟದಲ್ಲಿದ್ದ ‘ಅವಳ” ದೇಹವನ್ನು ಬಯಸಿದ ಪಾಪಿಗಳ ದಂಡು ಕೆಲಸ ಕೊಡಿಸುವ ನೆಪದಲ್ಲಿ ಅವಳ ಶಿಲವನ್ನು ಕೆಡಿಸುತ್ತಾರೆ.. ಇನ್ನೇನು ಬದುಕನ್ನೇ ಕಳೆದುಕೊಂಡ ಅವಳು ಜೀವ ಕಳೆದುಕೊಳ್ಳಲು ಮುಂದಾದಾಗ ಕಣ್ಣಿಗೆ ಕಾಣುವ “ಮಗಳ” ಬದುಕು ಅವಳನ್ನು ಚಿಂತಾಕ್ರಾಂತವಾಗಿಸುತ್ತದೆ, ಕೊನೆಗೆ ಮಗಳಿಗಾಗಿ ಬದುಕಲು ಮುಂದಾಗುವ ಅವಳು ತನ್ನ ದೇಹವನ್ನೇ ಮುಡಿಪಾಗಿಡುತ್ತಾಳೆ..  ಅವಳ ಬದುಕನ್ನು ಛಿದ್ರ ಮಾಡಿದ ಆ ಪಾಪಿಗಳ ತಂಡವನ್ನು ನಾಶ ಮಾಡಲು ಮುಂದಾಗಿ ಕೆಲಸ ಹುಡುಕುವುದನ್ನು ನಿಲ್ಲಿಸಿ ತನ್ನ ದೇಹವನ್ನೇ ಅಂಗಡಿ ಮಾಡಿಕೊಂಡು ಬದುಕುತ್ತಾಳೆ.. ಅವಳ ಜೀವನದ ಕಥೆಯನ್ನು ಹಾಳು ಮಾಡಿದ ಆ ಪಾಪಿಗಳ ನಾಯಕ  “ವಿಲನ್” ಮೇಲೆ ಅವಳಿಗೆ ಕೋಪ ಉಕ್ಕಿ ವಿಲನ್ ನ ಇಡಿ ವಂಶವನ್ನೇ ಮುಗಿಸಲು ಸಂಚು ರೂಪಿಸುತ್ತಾಳೆ ಅವಳು, ಆದರೆ ಹೆಣ್ಣುಗಳ ಬದುಕಿನೊಂದಿಗೆ ತನ್ನ ಹುಡುಗರು ಚಲ್ಲಾಟವಾಡುತ್ತಿರುವ ವಿಷಯ ತಿಳಿದು  ತನ್ನ “ಹುಡುಗರ”ನ್ನು ತಂಡದಿಂದ ಕಿತ್ತೊಗೆಯುತ್ತಾನೆ ವಿಲನ್, ವಿಲನ್ ನ ಗುಣಗಳನ್ನು ತಿಳಿದ ಅವಳು ವಿಲನ್ ಜೊತೆಗೆ ಒಂದಾಗಿ  ಪಾಪಿಗಳ ನಾಶಕ್ಕೆ ಅವರ ಸಹಕಾರವನ್ನು ಬಯಸುತ್ತಾಳೆ..

          ವೃತ್ತಿಯಲ್ಲಿ ತನ್ನ ದೇಹವನ್ನೇ ಅಂಗಡಿ ಮಾಡಿಕೊಂಡ “ಅವಳು” ತನ್ನ ಸಂಪೂರ್ಣ ಸಮಯ ತನ್ನ ಜೀವನ ಹಾಳು ಮಾಡಿದ ಆ ಖದಿಮರ ಜೀವನ ಕೊನೆಗಾಣಿಸಲು ಸಾಹಸ ಪಡುತ್ತಾಳೆ. “ಅವಳ” ಸಾಹಸಕ್ಕೆ “ವಿಲನ್” ಸಹಕಾರಿಯಾಗಿ ನಿಲ್ಲುತ್ತಾನೆ. ಈ ಕಥೆಯಲ್ಲಿ “ವಿಲನ್” ಪ್ರಮುಖ ಪಾತ್ರದಾರಿಯಾಗಿದ್ದು ವಿಲನ್ ಶ್ರೀಮಂತರು ನಯವಂಚಕರು ಇಂತವರನ್ನು ಸದೆಬಡಿದು ಬಡವರ ಪರವಾಗಿ ಬಡವರ ನ್ಯಾಯಕ್ಕಾಗಿ ನಿಲ್ಲುವ ವಿಶೇಷ ಪಾತ್ರದ ವಯಾಕ್ತಿಯಾಗಿರುತ್ತಾರೆ.

          ಈ ಕಥೆಯಲ್ಲಿ ಪ್ರವೆಶಿಸುವ ಮಹಿಳಾ ಪೋಲಿಸ್ ಅಧಿಕಾರಿ ನಗರದಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳ ಆರೋಪವನ್ನು ವಿಲನ್ ಮೇಲೆ ಹೊರಿಸುತ್ತ ನಂತರ ಸಂಶಯ “ಅವಳ” ಮೇಲೆ ಬೀರುತ್ತದೆ. ತನಿಖೆಯನ್ನು ಮುಗಿಸಿದ ಪೋಲಿಸ್ ಅಧಿಕಾರಿ ಇನ್ನೇನು ಅವಳನ್ನು ಭಂದಿಸಬೇಕು ಅನ್ನುವಷ್ಟರಲ್ಲಿ ಅವಳ ಮಗಳು ಜಿಲ್ಲಾಧಿಕಾರಿಯಾಗಿ ಇದೆ ನಗರಕ್ಕೆ ಆಗಮಿಸುತ್ತಿರುವ ವಿಷಯ ತಿಳಿದು “ಅವಳ” ಕುರಿತು ಮತ್ತೆ ವಿಷಯಗಳನ್ನು ತಿಳಿದುಕೊಳ್ಳಲು ಮುಂದಾಗುತ್ತಾಳೆ.

                ವೃತ್ತಿಯಲಿ ವೈಶ್ಯಾವೃತ್ತಿಯನ್ನೇ  ತನ್ನ ಕಾಯಕವಾಗಿಸಿಕೊಂಡ “ಅವಳು” ಈ ಕಾಮುಕ ಸಮಾಜದ ದೃಷ್ಟಿಗೆ ಬಿಳದಂತೆ ತನ್ನ ಮಗಳನ್ನು ಸಾಕುತ್ತಿರುತ್ತಾಳೆ ಒಳ್ಳೆಯ ದುಬಾರಿ ವಸತಿ ಶಿಕ್ಷಣವನ್ನು ನೀಡುವುದರ ಮೂಲಕ ಸಮಾಜದಲ್ಲಿ ತನ್ನ ಮಗಳು ಉತ್ತಮ ಪ್ರಜೆಯಾಗಬೇಕು ಒಳ್ಳೆಯ ಪದವಿ ಪಡೆಯಬೇಕು ಎಂದು ಹಂಬಲಿಸುತ್ತಾಳೆ. ತಾಯಿ ವೈಶ್ಯಾವೃತ್ತಿ ಮಾಡುತ್ತಿರುವ ವಿಷಯ ತಿಳಿದ ಮಗಳು ತಾಯಿಯೊಂದಿಗೆ ಜಗಳವಾಡಿ ತಾಯಿಯಿಂದ ದೂರವಾಗುತ್ತಾಳೆ…. ಆದರೆ ತಾಯಿಯೊಂದಿಗೆ ಆದ ಅನ್ಯಾಯವನ್ನು ತಿಳಿದುಕೊಂಡ ಮೇಲೆ ತಾಯಿಯನ್ನು ಅತಿ ಹೆಚ್ಚಾಗಿ ಪ್ರೀತಿಸಿ ತಾಯಿನನ್ನು ಮತ್ತೆ ಸೇರಿಕೊಂಡು ತಾಯಿಯ ಕನಸನ್ನು ಸಾಕಾರ ಮಾಡುವಲ್ಲಿ ಮುಂದಾಗುತ್ತಾಳೆ….

          ಅಂತಿಮವಾಗಿ ಜಿಲ್ಲಾಧಿಕಾರಿ ಪದವಿಯನ್ನು ಗಳಿಸಿದ ಮಗಳು ಸಭೆಯೊಂದರಲ್ಲಿ ತಾಯಿಯನ್ನು ವೇದಿಕೆಗೆ ಆಹ್ವಾನಿಸುವಾಗ ಜನರೆಲ್ಲಾ ಆಡಿಕೊಳ್ಳುತ್ತಾರೆ “ಸೂಳೆಯ ಮಗಳು” ಎಂಬಂತೆ ಮಗಳನ್ನು ಆಡಿಕೊಳ್ಳುತ್ತಾರೆ ಆದರೆ ವೇದಿಕೆಯಲ್ಲಿ ಮಗಳು ಮಾತನಾಡುವಾಗ ನೆರೆದ ಜನರೆಲ್ಲಾ ಕಣ್ಣಿರು ಹಾಕುತ್ತಾರೆ “ಅವಳು” ಕೈ ಮುಗಿದು ಕಣ್ಣಿರು ಹಾಕುತ್ತಿರುವಾಗ “ದೇವರು” ಇಲ್ಲ ಇಲ್ಲವೇ ಇಲ್ಲ ಮಕ್ಕಳಿಗೋಸ್ಕರ ತನ್ನ ದೇಹವನ್ನೇ ಮುಡಿಪಾಗಿಟ್ಟ “ಅವಳು” “ಅಮ್ಮ” ನಿಜವಾದ ದೇವರು ಎಂದು ಮಗಳು ಅಮ್ಮನ ಕಾಲಿಗೆ ನಮಸ್ಕಾರ ಮಾಡುತ್ತಾಳೆ. ಇದನೆಲ್ಲ ನೋಡುತ್ತಿದ್ದ ಪೋಲಿಸ್ ಅಧಿಕಾರಿ ಮುಂದೆ ಬಂದು ಜಿಲ್ಲಾಧಿಕಾರಿಗಳಿಗೆ ಸೇಲ್ಯೋಟ ಮಾಡುತ್ತಾ ಅಮ್ಮನ ಬಳಿ ಬಂದು ಅಮ್ಮನ ಪಾದಕ್ಕೆ ನಮಸ್ಕರಿಸುತ್ತ ಅಮ್ಮ…. ಎಲ್ಲಾ ಮಕ್ಕಳಿಗೂ ನಿಮ್ಮಂತ ಅಮ್ಮ ಇದ್ದರೆ ಮಕ್ಕಳ ಬದುಕೇ ಸಾರ್ಥಕ…    

(ಪ್ರಧಾನ ನಾಯಕಿ ವೈಶ್ಯಾ ವೃತ್ತಿ ಯನ್ನು ಮಾಡುತ್ತಿದ್ದು ಚಿತ್ರದ ಪಾತ್ರಗಳು ಸ್ವಲ್ಪ ಮಟ್ಟಿಗೆ ಬೋಲ್ಡ್ ಪಾತ್ರವಾಗಿವೆ, ಚಿತ್ರದ ಪಾತ್ರಕ್ಕೆ ಜೀವ ತುಂಬುವಷ್ಟು ಮಾತ್ರ ಬೋಲ್ಡ್ ಆಗಿರುತ್ತದೆ, ವೈಶ್ಯಾ ವೃತ್ತಿಯ ಕೆಲವು ದೃಶ್ಯಗಳು ಸ್ವಲ್ಪ ಮಟ್ಟಿಗೆ ಬೋಲ್ಡ್ ಆಗಿದ್ದು ಇನ್ನುಳಿದ ಸಂಪೂರ್ಣ ಚಿತ್ರವೂ ಚಿತ್ರ ಕಥೆಯನ್ನು ಬಿಂಬಿಸುವ ಕಾರ್ಯವನ್ನು ಮಾಡುತ್ತದೆ ಹಾಗೂ ಚಿತ್ರ ಸಂಪೂರ್ಣ ಕುಟುಂಬ ಸಮೇತ ವೀಕ್ಷಿಸುವ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರದರ್ಶಿಸಬಹುದಾದ ಚಿತವಾಗಿದೆ)

  • 2 ನಾಯಕಿ
  • ಸಮಾಜ ಸೇವಕಿ : ನಾಯಕಿ

          “ಅವಳು” ಶ್ರೀಮಂತ ಕುಟುಂಬದ ಮಹಿಳೆ, ಗಂಡ ಅತ್ತೆ ಮಾವನ ಜೊತೆ ಬದುಕುತ್ತಿರುವ “ಅವಳು” ಸಮಾಜದಲ್ಲಿ ಆಗುತ್ತಿರುವ ಮತ್ತು ಆಗುವ ಅನ್ಯಾಯಗಳ ವಿರುದ್ದ ಹೋರಾಡುವ ಮಹಿಳಾ ಹೊರಾಟಗಾರ್ತಿಯ ಪಾತ್ರವನ್ನು ನಿರ್ವಹಿಸುತ್ತದೆ, ಸಮಾಜದ ಅಂಕು ಡೊಂಕುಗಳನ್ನು ತಿದ್ದುತ್ತ, ಅನ್ಯಾಯಕ್ಕೆ ಒಳಗಾದವರ ಧ್ವನಿಯಾಗಿ ಕಾರ್ಯ ಮಾಡುತ್ತಿರುವ “ಅವಳು”  ಸಮಾಜ ಸೇವಕಿ ಸಮಾಜದಲ್ಲಿ ವಿವಿದ ಜನರ ಧ್ವನಿಯಾಗಿ ಕಾರ್ಯ ಮಾಡುತ್ತಾಳೆ. ಲಂಚ ಬ್ರಷ್ಟಾಚಾರಗಳ ವಿರುದ್ದ ಹೋರಾಟ ಮಾಡುತ್ತಾ ಸಮಾಜದಲ್ಲಿ “ಅಕ್ಕ” ಎಂಬ ಪದವಿಯನ್ನು ಜನರ ಮನಸ್ಸಿನಲ್ಲಿ ಪಡೆದಿರುತ್ತಾಳೆ. ದೊಡ್ಡ ದೊಡ್ಡ ಅಧಿಕಾರಿಗಳು ಸಹ ಅವಳನ್ನು ನೆನೆದು ಮೈ ನಡುಗುತ್ತಾರೆ “ಅವಳ” ಹೋರಾಟದ ಬೆಂಕಿಯಲ್ಲಿ ಎಷ್ಟೋ ಅಧಿಕಾರಿಗಳು ತಮ್ಮ ಉದ್ಯೋಗ ಕಳೆದುಕೊಂಡಿರುತ್ತಾರೆ.

          ಅವಳು ತನ್ನ ಹೋರಾಟದ ದಾರಿಯಲ್ಲಿ ಮುಂದುವರೆಯುವಾಗ ವೈರಿಗಳ ಕೋಪಕ್ಕೆ ಗುರಿಯಾದ ಸಂದರ್ಬದಲ್ಲಿ “ವಿಲನ್” ಅವಳನ್ನು ರಕ್ಷಿಸುತ್ತಾನೆ. ಅವಳ ಹೋರಾಟವನ್ನು ಸಹಿಸದ ಕೆಲವು ಅಧಿಕಾರಿಗಳು ಅವಳ ಮೇಲೆ ಸುಳ್ಳು ಆಪಾದನೆಗಳನ್ನು ಹಾಕಿರುವಾಗ  ಸರಣಿ ಕೊಲೆಗಳ ತನಿಕೆ ಮಾಡುತ್ತಿರುವ ಪೋಲಿಸ್ ಅಧಿಕಾರಿ ಅವಳನ್ನು ಸುಳ್ಳು ಆಪಾದನೆಗಳಿಂದ ಪಾರು ಮಾಡುತ್ತಾಳೆ.. ಹೀಗೆ ಹೋರಾಟವನ್ನು ಮುಂದುವರೆಸಿದ “ಅವಳು”  ಸ್ವಹತ ಜೀವನದಲ್ಲಿ ಸೋತು ಹೋಗುತ್ತಾಳೆ.

          ಮಕ್ಕಳಾಗದ ಕಾರಣ ಮನೆಯಲ್ಲಿ ಅತ್ತೆ “ಬಂಜೆ” ಎಂಬ ಪಟ್ಟವನ್ನು ಕಟ್ಟಿ ಹಿಂಸಿಸಿದರೆ, ಮನೆ ಬೆಳಗಲು ಒಂದು ಮಗುವನ್ನು ಕೊಡಲಿಲ್ಲವೆಂದು ಮಾವ ಸೊಸೆಯನ್ನು ಕೀಳಾಗಿ ನೋಡುತ್ತಾನೆ… ಮದುವೆಯಾಗಿ ಐದು ವರ್ಷವಾದರೂ ಮಕ್ಕಳಾಗಲಿಲ್ಲ ಅಂತ ಗಂಡ ಸಹ ಅವಳನ್ನು ಮಾನಸಿಕವಾಗಿ ಹಿಂಸಿಸುತ್ತಾನೆ.

          ಅತ್ತೆ ಮಾವ ಗಂಡ ಮೂವರು ಸೇರಿ ಮೂಡ ನಂಬಿಕೆಗಳ ಬೆನ್ನು ಹತ್ತಿ ಕೆಲವು ಮಾಟಗಾರರನ್ನು ಕರೆಯಿಸಿ ಮಾಟದ ಪ್ರಯೋಗದ ಮೂಲಕ ಮಕ್ಕಳನ್ನು ಪಡೆಯಲು ಪ್ರಯತ್ನಿಸುತ್ತಾರೆ, ಇಡಿ ಮನೆಯ ವಾತಾವರಣ ಹಾಳಾಗುತ್ತದೆ, ಅವಳ ಮೇಲೆ ಹತ್ತು ಹಲವು ಪ್ರಯೋಗಗಳು ಆಗುತ್ತವೆ, ಅತ್ತೆ ಮಾವ ಗಂಡನ ಈ ಮೂಡ ನಂಬಿಕೆಯ ಹುಚ್ಚಾಟಕ್ಕೆ ಅವಳು ಕಂಗಾಲಾಗಿ ಹೋಗುತ್ತಾಳೆ.

          ಆರಂಬವಾದ ಮೂಡ ನಂಬಿಕೆಯ ಅರ್ಭಟ ಮಿತಿ ಮಿರಿದಾಗ ಅತ್ತೆ ಮಾವ ಗಂಡನನ್ನು ವಿರೋಧಿಸುತ್ತಾಳೆ “ಅವಳು” ಅದರೂ ನಿಲ್ಲದ ಅವರ ಹುಚ್ಚಾಟ ತಾಳದೆ ಗಂಡನಿಂದ ಬೇರೆ ಆಗುತ್ತಾಳೆ “ಅವಳು”

          ಗಂಡನೇ ಸರ್ವಸ್ವ ಎಂದು ಬದುಕುತ್ತಿರುವ ಅವಳಿಗೆ ಈಗ ನೆಲೆ ಇಲ್ಲ ತವರು ಮನೆ ಸಹ ಇಲ್ಲದ ಅವಳ ಪಾಲಿಗೆ ಇದು ಅಸಹಾಯಕತೆಯ ಬದುಕು.  ಇಂತಹ ಘೋರ ಬದುಕಿಗಾಗಿ  ಅವಳು ಕಣ್ಣಿರು ಹಾಕುತ್ತ ತನ್ನ ಬದುಕನ್ನು ಚಿತ್ರಿಸಿದ ದೇವರನ್ನು ಶಪಿಸುತ್ತಾಳೆ.

          ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡ “ಅವಳು” ಸ್ವಂತ ತನ್ನ ಜೀವನಕ್ಕೆ ನ್ಯಾಯವನ್ನು ಕಂಡುಕೊಳ್ಳಲು ಆಗದ ಪರಿಸ್ಥಿತಿಯ ಮದ್ಯ ತನ್ನ ಸಮಾಜ ಸೇವೆಯ ಕಾರ್ಯವನ್ನು ಮುಂದುವರೆಸುತ್ತಾಳೆ. ಸಮಾಜವೇ ತನ್ನ ತವರು ಮನೆ ಎಂದು ಭಾವಿಸಿ ಅನ್ಯಾಯಕ್ಕೆ ಒಳಗಾದವರ ಕೂಗಾಗಿ ಜೀವನ ನಡೆಸುತ್ತಾಳೆ. ನಗರದಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳ ಬಗ್ಗೆ ವಿಷಯ ಸಂಗ್ರಹಿಸಿದ ಅವಳು ಪೋಲಿಸ್ ಅಧಿಕಾರಿಯ ವಿರುದ್ದ ಸಮರ ಸಾರುತ್ತಾಳೆ, ವೈಶ್ಯರ ಮೇಲೆ ಸಂಶಯಗೊಂಡು ವೈಶ್ಯೆಯನ್ನು  ಪೊಲೀಸರು ವಿಚಾರಿಸುವಾಗ ಸಮಾಜ ಸೇವಕಿ ಪೊಲೀಸರೊಂದಿಗೆ ಜಗಳವಾಡುತ್ತಾಳೆ, ಯಾವದೋ ಕೊಲೆಯ ಅಪರಾಧಿಗಳನ್ನು ಭಂದಿಸದೆ ಅಮಾಯಕಳ ಮೇಲೆ ಪೋಲಿಸ್ ದರ್ಪ ತೋರಿಸುತ್ತಿರುವ ಬಗ್ಗೆ ಅವಳ ಹೋರಾಟ. 

          ಮೂಡ ನಂಬಿಕೆಯ ಸುತ್ತ ಹೋದ ಗಂಡ ಅತ್ತೆ ಮಾವ ಡೋಂಗಿ ಮಾತಗಾರರು ಬೀಸಿದ ಜಾಲದಲ್ಲಿ ಸಿಲುಕಿ ಇದ್ದ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದಿದ್ದರು. ಮಾಟ ಮಾತ್ರದ ಸೋಗಿನಲ್ಲಿ ಬಂದಿದ್ದ ನಯವಂಚಕರು ಅವರ ಎಲ್ಲಾ ಹಣವನ್ನೂ ಖಾಲಿ ಮಾಡಿದ್ದಲ್ಲದೆ ಇದ್ದ ಮನೆಯನ್ನೂ ಸಹ ಕಸಿದುಕೊಂಡಿದ್ದರು, ದೇವರೇ ಕೊಡದ ಸಂತಾನವನ್ನು ಪಡೆಯಲು ವಾಮ ಮಾರ್ಗವನ್ನು ಅನುಸರಿಸಿದ ಇವರು ಈಗ ಬೀದಿಗೆ ಬಂದಿದ್ದರು.

          ಒಂದು ದಿನ ಬೀದಿಗೆ ಬಂದ ಗಂಡ ಅತ್ತೆ ಮಾವರನ್ನು ನೋಡಿದ ಅವಳು ಅವರ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಕಣ್ಣಿರು ಹಾಕಿತ್ತಾಳೆ. ಸೊಸೆಯ ಕಣ್ಣಿರು ನೋಡಿದ ಅತ್ತೆ ಸೊಸೆಯ ಕಾಲಿಗೆ ಬಿಳಲು ಮುಂದಾದಾಗ ಅವರನ್ನು ತಡೆದ “ಅವಳು” ಅತ್ತೆ ಮಾವಂದಿರು ನನ್ನ ತಂದೆ ತಾಯಿ ಸ್ಥಾನದಲ್ಲಿರುವ ಬಗ್ಗೆ ಹೇಳಿ ಸಮಾದಾನ ಪಡಿಸುತ್ತಾಳೆ, ಎಲ್ಲವನ್ನು ನೋಡುತ್ತಿರುವ ಗಂಡ ತಲೆ ತಗ್ಗಿಸಿ ನಿಂತಿರುವಾಗ ಯಾಕ್ರೀ ಆಗೋದೆಲ್ ಒಳ್ಳೆಯದಕ್ಕೆ ಹೋಗ್ಲಿ ಬೀಡಿ ಎಂದು ಗಂಡನಿಗೆ ಸಮಾದಾನ ಮಾಡೋವಾಗ, ಗಂಡ ತಲೆ ತಗ್ಗಿಸಿ ನಮಗೆ ಮಕ್ಕಳು ಬೇಡ ಕಣೆ ನಾನೆ ನಿನಗೆ ಮಗ ನೀನೆ ನನಗೆ ಮಗಳು ನಾನು ಇಂದಿನಿಂದ ನಿನ್ನ ಸಾಮಾಜಿಕ ಹೋರಾಟದಲ್ಲಿ ಭಾಗಿಯಾಗುತ್ತೇನೆ ಈ ಸಮಾಜವೇ ನಮಗೆ ಮನೆ ಎನ್ನುತ್ತಾ ಅವಳನ್ನು ಅಪ್ಪಿಕೊಳ್ಳುತ್ತಾನೆ.. ಅತ್ತೆ ಮಾವ ಮಗ ಸೊಸೆಯನ್ನು ತಬ್ಬಿಕೊಂಡು ನಮ್ಮನ್ನು ಕ್ಷಮಿಸು ಮಗಳೇ… ಮನೆ ಬೆಳಗಲು ಮಕ್ಕಳು ಬೇಕು ಅಂತಿಲ್ಲ ಮಗಳೇ ಈ ಸಮಾಜ ಬೆಳಗಲು ನಿನಂತ ಮಗಳು ಬೇಕು  ಅಂತ ಸೋಸೆಯ ಕಾರ್ಯಕ್ಕೆ ಮೆಚ್ಚುಗೆ ನೀಡುತ್ತಾರೆ.

  • 3 ನಾಯಕಿ
  • ತಾಯಿ : ನಾಯಕಿ

          ಮದ್ಯಮ ಕುಟುಂಬ ಗಂಡ ಹೆಂಡತಿ ಇಬ್ಬರು ಮಕ್ಕಳು, ಮಗ ಪಿಯುಸು ಕಲಿಯುತ್ತಿದ್ದಾನೆ ಮಗಳು ಹತ್ತನೇ ತರಗತಿ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡುತ್ತಿರುವ ಮದ್ಯಮ ವರ್ಗದ ಕುಟುಂಬ ಮಕ್ಕಳ ಮೇಲೆ ಕನಸನ್ನೇ ಕಟ್ಟಿಕೊಂಡಿದೆ ಕೂಲಿ ನಾಲಿ ಮಾಡಿ ಬದುಕಿದರೂ ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವಲ್ಲಿ ಕುಟುಂಬ ಸಾಹಸ ಪಡುತ್ತಿದೆ, ಮಗಳು ಈ ಬಾರಿ ತನ್ನ ಹತ್ತನೇ ತರಗತಿ ಮುಗಿಸಿಕೊಂಡರೆ ಅವಳನ್ನು ಮುಂದೆ ಕಾಲೇಜಿಗೆ ಸೇರಿಸಲು ಗಂಡ ಹೆಂಡತಿ ಹಣವನ್ನು ಕೂಡಿಸುತ್ತಿರುವಾಗ ಒಂದು ದಿನ ಮಗಳು ಮನೆಗೆ ಬರಲೇ ಇಲ್ಲ.. ಮಗಳನ್ನು ಹುಡುಕಲು ಆರಂಬಿಸಿದ ತಂದೆ ತಾಯಿಗೆ ಆಘಾತ ಯಾವುದೋ ಹುಡುಗನನ್ನು ಪ್ರೀತಿಸಿದ ಮಗಳು ಆ ಹುಡುಗನ ಜೊತೆ ಓಡಿ ಹೋಗಿದ್ದಾಳೆ, ವಿಷಯ ತಿಳಿಯುತ್ತಲೇ ಹೃದಯಾಘಾತದಿಂದ ಗಂಡ ಸತ್ತು ಹೋಗುತ್ತಾನೆ.

          ಗಂಡನ ಅಗಲಿಕೆಯಿಂದ ಅವಳು ಆಸರೆ ಇಲ್ಲದಂತಾಗುತ್ತಾಳೆ, ಮಗಳ ಹೆಸರು ಸಹ ಕೇಳಲು ಆಗದಷ್ಟು ಮಗಳ ಮೇಲೆ ಸಿಟ್ಟಾಗುತ್ತಾಳೆ ಮಗನನ್ನು ಸಲಹುತ್ತಾ ತನ್ನ ಜೀವನವನ್ನು ಸವೆಯುತ್ತಾಳೆ ಗಂಡನ ಆಸೆಯಂತೆ ಮಗನನ್ನು ಒಬ್ಬ ಅಧಿಕಾರಿಯಾಗಿ ಮಾಡಬೇಕು ಅಂತ ಅವಳು ಪ್ರಯಾಸ ಪಡುತ್ತಾಳೆ

          ಇತ್ತ ಓಡಿ ಹೋದ ಮಗಳು ಪ್ರಿಯಕರನಿಂದ ಮೋಸಕ್ಕೆ ಒಳಗಾಗುತ್ತಾಳೆ, ಅವಳ ದೇಹವನ್ನು ಅನುಭವಿಸಿದ ಆ ಪ್ರೇಮಿ ಕೆಲವು ದಿನಗಳು ಲಾಜ್ ನಲ್ಲಿ ಜೊತೆಗಿದ್ದು, ಭಾಡಿಗೆ ಮನೆ ಹುಡುಕುತ್ತಿದ್ದೇನೆ ಮನೆ ಸಿಕ್ಕ ತಕ್ಷಣ ಮದುವೆ ಮಾಡಿಕೊಳ್ಳುವ ಭರವಸೆ ನೀಡುತ್ತ ಒಂದು ದಿನ ವಾಪಸ್ಸು ಬರಲೇ ಇಲ್ಲ. ಅವಳ ಜೊತೆ ಕಳೆದ ಖಾಸಗಿ ಸಮಯಗಳ ವಿಡಿಯೋಗಳನ್ನು ಮಾಡಿ ಅಂತರ್ಜಾಲದಲ್ಲಿ ಬಿಟ್ಟಿರುತ್ತಾನೆ ಅಂತರ್ಜಾಲದಲ್ಲಿ ತನ್ನ ವಿಡಿಯೋ ಲಿಂಕ್ ಅನ್ನು ಆ ಹುಡುಗ ಇವಳಿಗೆ ಕಳುಹಿಸಿದಾಗಲೇ ಇವಳಿಗೆ ಗೊತ್ತಾಗಿದ್ದು ತಾನು ಮೋಸ ಹೋಗಿರುವ ಬಗ್ಗೆ, ಅಪ್ಪ ಅಮ್ಮನನ್ನು ನೆನೆಸಿ ಕಣ್ಣಿರು ಹಾಕುತ್ತಾಳೆ, ಅಪ್ಪ ಅಮ್ಮನ ಕಾಲಿಗೆ ಬಿದ್ದು ಕ್ಷಮೆ ಕೇಳಲು ಅವಳು ತನ್ನೂರಿಗೆ ಹೋಗುತ್ತಾಳೆ ಆದರೆ ತಾನು ಮಾಡಿದ ತಪ್ಪಿಗೆ ಅಪ್ಪ ಸತ್ತು ಹೋಗಿರುವ ವಿಷಯ ತಿಳಿದು ಮತ್ತೆ ಕಣ್ಣಿರು ಹಾಕುತ್ತ ತಾನೂ ಸಹ ಸಾಯಲು ಮುಂದಾಗುತ್ತಾಳೆ, ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಸಮಯದಲ್ಲಿ ವೈಶ್ಯೇಯೋಬ್ಬಳು ಇವಳನ್ನು ಬದುಕಿಸುತ್ತಾಳೆ.

          ಇತ್ತ ವರ್ಷಗಳು ಗತಿಸಿಹೊದವು ಮಗ ಈಗ ಒಂದು ಉತ್ತಮ ಕೆಲಸವನ್ನು ಪಡೆದುಕೊಂಡಿದ್ದಾನೆ, ತಾಯಿ ಮಗನ ಮದುವೆ ಮಾಡಿಸುತ್ತಾಳೆ ಆದರೆ ಬಂದ ಸೊಸೆ ಅವಳಿಗೆ ಆಸರೆಯಾಗದೆ ಮಗನನ್ನು ತಾಯಿಯಿಂದ ದೂರ ಮಾಡುತ್ತಾಳೆ. ತಾಯಿಯನ್ನು ಮನೆಯಿಂದ ಆಚೆ ಹಾಕಿದ ಮಗ ಹೆಂಡತಿಯ ಗುಲಾಮನಾಗಿ ಬದುಕುತ್ತಾನೆ.

          ತನ್ನ ಹಣೆಬರಹ ನೆನೆದು ದೇವರಿಗೆ ಶಾಪ ಹಾಕಿದ ತಾಯಿ ತನ್ನ ಬದುಕನ್ನು ನೆನೆದು ಕಣ್ಣಿರು ಹಾಕುತ್ತಾಳೆ, ಅಲ್ಲಿ ಇಲ್ಲಿ ತಿರುಗುತ್ತಾ ಬಿಕ್ಷೆ ಬೇಡುತ್ತಾ ತನ್ನ ಜೀವನವನ್ನು ನಡೆಸುತ್ತಿರುತ್ತಾಳೆ.

          ಒಂದು ದಿನ ಬಿಕ್ಷೆ ಬೇಡುತ್ತಿರುವ ತಾಯಿಯನ್ನು ನೋಡಿದ ಮಗಳು ತಡೆಯಲಾರದೆ ಅಮ್ಮನ ಹತ್ತಿರ ಹೋಗಿ ಕಾಲಿಗೆ ಬಿದ್ದು ಕ್ಷಮೆಯನ್ನು ಕೇಳುತ್ತಾಳೆ. ಮಗಳನ್ನು ನೋಡಿದ ತಾಯಿ ಒಂದು ಕ್ಷಣ ಸಂತೋಷಗೊಂಡು ಮರು ಕ್ಷಣವೇ ತನ್ನ ಗಂಡನ ಸಾವಿಗೆ ಕಾರಣವಾದ ಮಗಳನ್ನು ನೋಡಿ ಹಿಂದೆ ಸರಿಸು ಅಲ್ಲಿ ನಿಲ್ಲದೆ ಹೋಗಿ ಬಿಡುತ್ತಾಳೆ ತಾಯಿ,  

          ತಾಯಿಯ ಪರಿಸ್ಥಿತಿಯನ್ನು ನೋಡಿದ ಮಗಳು ಅಲ್ಲಿಯೇ ಕುಸಿದು ಬೀಳುತ್ತಾಳೆ, ತನ್ನ ತಾಯಿಯ ಇಂತಹ ಪರಿಸ್ಥಿಗೆ ತಾನೇ ನೇರ ಕಾರಣ ಎಂದು ರೋಧಿಸುತ್ತ.ಹೊರಟು ಹೋದ ತಾಯಿಯನ್ನು ಹುಡುಕಲು ಸಾಹಸ ಪಡುತ್ತಾಳೆ ಮಗಳು ಆದರೆ ತಾಯಿ ಸಿಗುವುದೇ ಇಲ್ಲ. ತಾಯಿಯನ್ನು ಹುಡುಕುತ್ತ ಹೋರಟ ಅವಳು. ತಾನು ಮಾಡಿದ ತಪ್ಪಿನ ಪ್ರಾಯಶ್ಚಿತಕ್ಕಾಗಿ ಮಾರ್ಗವನ್ನು ಹುಡುಕುತ್ತಾಳೆ. 

          ತನ್ನನ್ನು ಸಾಯುವ ಸಮಯದಲ್ಲಿ ಕಾಪಾಡಿದ ಕಥಾನಾಯಕಿ ವೈಶ್ಯೆ ಮತ್ತೆ ಸಿಗುತ್ತಾಳೆ ಅವಳೊಂದಿಗೆ ತನ್ನ ನೋವನ್ನೂ ತೋಡಿಕೊಳ್ಳುತ್ತಾಳೆ, ಮುಂದೆ ಅವಳು ಮಕ್ಕಳಿಂದ ದೂರವಾಗಿರುವ ಎಷ್ಟೋ ತಾಯಂದಿರು ಹೀಗೆ ಅನಾಥವಾಗಿ ಅಲೆದಾದುತ್ತಿದ್ದು ಅವರಿಗೋಸ್ಕರ “ತಾಯಿಯ ಮನೆ” ಸ್ಥಾಪಿಸುವ ಬಗ್ಗೆ ತಿರ್ಮಾನ ಮಾಡಿಕೊಂಡು ಅದನ್ನು ಸಾಧಿಸಲು ಮುನ್ನುಗ್ಗುತ್ತಾಳೆ.

ತನ್ನ ಕಾರ್ಯಕ್ಕೆ ಮತ್ತೊಬ್ಬ ಕಥಾ ನಾಯಕಿ ಸಮಾಜ ಸೇವಕಿಯ ಸಹಾಯವನ್ನು ಪಡೆಯುತ್ತಾಳೆ, ಹೀಗೆ ಛಲ ಬಿಡದೆ ಮುನ್ನುಗ್ಗಿದ ಅವಳು ಸಾದಿಸಿಯೇ ಬಿಡುತ್ತಾಳೆ. ಅವಳು ಕಟ್ಟಿದ “ತಾಯಿಯ ಮನೆ” ಉದ್ಗಾಟನೆಯನ್ನು ನಗರಕ್ಕೆ ಹೊಸದಾಗಿ ಬಂದ ಜಿಲ್ಲಾಧಿಕಾರಿಗಳು ನೆರವೇರಿಸಲಿದ್ದಾರೆ.

ಅಮ್ಮನ ಮನೆ ಉದ್ಗಾತನೆಯನ್ನು ಜಿಲ್ಲಾಧಿಕಾರಿಗಳು ನೆರವೇರಿಸಿದರು . ಮಗಳ ಸಾಧನೆಯನ್ನು ದೂರದಿಂದಲೇ ನೋಡಿದ ತಾಯಿ ಕಣ್ಣಿರು ಹಾಕುತ್ತ ಮಗಳನ್ನು ದೂರದಿಂದಲೇ ಹರಸುತ್ತಾಳೆ…

(ಅಮ್ಮನ ಮನೆ ಉದ್ಘಾಟನೆಯ ವಿಷಯಗಳು ಕ್ಲೈಮಾಕ್ಸ್ ನಲ್ಲಿ ನಮೂದಿಸಲಾಗಿದೆ)

  • 4 ನಾಯಕಿ
  • ಬಡ ಮಹಿಳೆ : ನಾಯಕಿ

                  ಕುಟುಂಬವನ್ನು ಸಲಹುತ್ತಿರುವ ಬಡ ಮಹಿಳೆ, ಕುಡುಕ ಗಂಡ ಮೂವರು ಮಕ್ಕಳು ತನ್ನ ಬದುಕನ್ನು ಗಂಡ ಮತ್ತು ಮಕ್ಕಳಿಗಾಗಿ ಮಿಸಲಿಟ್ಟಿದ್ದಾಳೆ “ಅವಳು” ಬುದ್ದಿವಂತ ಮಕ್ಕಳು ಒಬ್ಬಳು ಹತ್ತನೆಯ ತರಗತಿ ಓದುತ್ತಿದ್ದರೆ ಇನ್ನೊಬ್ಬಳು ಎಂಟನೆಯ ತರಗತಿ ಮಗದೊಬ್ಬಳು ಆರನೆಯ ತರಗತಿ ಮೂರ್ವರೂ ಹೆಣ್ಣು ಮಕ್ಕಳು ಅವಳ ಪರಿಸ್ಥಿತಿ ಹೇಗಪ್ಪ ಅಂದರೆ ಅಯ್ಯೋ ಮೂರು ಮಕ್ಕಳ ವಿದ್ಯಾಬ್ಯಾಸದ ಜೊತೆ ಎಂಟನೆ ತರಗತಿ ಓದುತ್ತಿರುವ ಮಗಳು ಕ್ರೀಡೆಯಲ್ಲಿ ಮುಂದಿದ್ದಾರೆ ಆರನೇ ತರಗತಿಯ ಮಗಳು ನೃತ್ಯದಲ್ಲಿ ಆಸಕ್ತಳಾಗಿದ್ದಾಳೆ,ಹತ್ತನೆಯ ತರಗತಿಯ ಮಗಳು ಕೇವಲ ಅಬ್ಯಾಸದಲ್ಲಿ ತುಂಬಾ ಜಾಣೆ  ಮಕ್ಕಳ ಬೇಕು ಬೇಡಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇತ್ತ ಕುಡುಕ ಗಂಡ ನೆಪ ಮಾತ್ರಕ್ಕೆ ಗಾಡಿಯಲ್ಲಿ ಕಾಯಿಪಲ್ಲೆ ವ್ಯಾಪಾರ ಮಾಡಲು ಹೊರಟು ವಾಪಸ್ಸು ಬರುವುದೇ ರಾತ್ರಿ ಕುಡಿದ ಮತ್ತಿನಲ್ಲಿ. ಗಂಡನ ಕುಡಿತದ ಚಟ ಎಷ್ಟೇ ಇದ್ದರೂ ಹೆಂಡತಿಯನ್ನು ಮಕ್ಕಳನ್ನು ತುಂಬಾ ಪ್ರೀತಿಸುವ ವ್ಯಕ್ತಿ, ಕುಡಿತದ ಚಟ ಮಾತ್ರ ಆತನನ್ನು ಬಿಡುತ್ತಿಲ್ಲ, “ಅವಳು” ಮಾತ್ರ ಹಗಲು ರಾತ್ರಿಯೇನ್ನದೇ ತನ್ನ ಗಂಡ ಮಕ್ಕಳಿಗಾಗಿ ದುಡಿದು ದುಡಿದು ಸಣ್ಣವಾಗುತ್ತಿದ್ದಾಳೆ.

                  ಕುಡಿದ ಮತ್ತಿನಲ್ಲಿ ರಾತ್ರಿ ಮನೆಗೆ ಬರುವ ಗಂಡ ಎದ್ದೇಳುವುದು ಬೆಳಿಗ್ಗೆ 10 ರ ನಂತರವೇ, ಅಷ್ಟೊತ್ತಿಗಾಗಲೇ ಮಕ್ಕಳೆಲ್ಲ ಶಾಲೆಗೇ ಹೊರಟು ಮಕ್ಕಳಿಗೂ ಸಹ ಅಪ್ಪನ ಪ್ರೀತಿಯಿಂದ ವಂಚಿತರಾಗಿದ್ದಾರೆ, “ಅವಳು” ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಾಳೆ, ನಗರಸಭೆಯ ಕಸ ಗುಡಿಸುವ ಕೆಲಸಕ್ಕೆ ಹೋಗಿ 9 ರ ಸುಮಾರು ಮನೆಗೆ ಬಂದು ಮಕ್ಕಳಿಗೆ ಶಾಲೆಗೇ ಕಳುಹಿಸಿ ಮತ್ತೆ ಬೇರೆ ಕೆಲಸ, ಹಾಗಂತ “ಅವಳು” ನಗರಸಭೆಯ ಕಾರ್ಮಿಕೆ ಅಲ್ಲ ಯಾರೋ ಸಹಿ ಮಾಡಿ ಸಂಬಳ ಪಡೆದರೆ ಅವಳು ಆ ಕೆಲಸವನ್ನು ಮಾಡಿ ಬಿಡಿಕಾಸು ಪಡೆದು ಜಿವಿಸುತ್ತಿದ್ದಾಳೆ, ನಗರಸಭೆಯ ಸ್ವಚ್ಛತಾ ಕೆಲಸದ ನಂತರ, ಕೆಲವು ಮನೆಗಳಿಗೆ ಕೆಲಸಕ್ಕೆ ಹೋಗುತ್ತಾಳೆ, ಸಂಜೆ ರಸ್ತೆ ಪಕ್ಕ ಅಂಗಡಿಯನ್ನು ಇಟ್ಟುಕೊಂಡಿದ್ದಾಳೆ, ಶಾಲೆ ಬಿಟ್ಟ ನಂತರ ಮಕ್ಕಳು ಸಹ ತಾಯಿಯ ಕೆಲಸಕ್ಕೆ ನೆರವಾಗುತ್ತಾರೆ ಆದರೆ ಅತಿ ಹೆಚ್ಚಾಗಿ ಪ್ರೀತಿಸುವ ಗಂಡ ಮಾತ್ರ ಎಲ್ಲಿಯೋ ಕುಡಿದು ಮತ್ತಿನಲ್ಲಿ ಬಿದ್ದಿರಬೇಕು.

                  ಹೀಗೆ ಬಡ ಮಹಿಳೆಯ ಕೌಟುಂಬಿಕ ಜೀವಿತ ನಿತ್ಯ ನಡೆಯುತ್ತಿರುವಾಗ, ರಸ್ತೆಯ ಕಸವನ್ನು ಹೊಡೆಯುತ್ತಿರುವ ದೃಶ್ಯವನ್ನು ಗಂಡ ನೋಡಿಬಿದುತ್ತಾನೆ, ಹೆಂಡತಿಯ ಇಂತಹ ಪರಿಸ್ಥಿತಿಯನ್ನು ನೋಡಿ ಹೆಂಡತಿಯ ಹತ್ತಿರ ಹೋಗಿ ಕಸಬರಿಗೆಯನ್ನು ಇಸಿದುಕೊಂಡು ಕ್ಷಮೆ ಕೇಳುತ್ತಾನೆ ಹಾಗೂ ಇನ್ನು ಮುಂದೆ ಕುಡಿಯದಿರುವ ಬಗ್ಗೆ ಹೆಂಡತಿ ಮಕ್ಕಳನ್ನು ಚನ್ನಾಗಿ ನೋಡಿಕೊಳ್ಳುವ ಬಗ್ಗೆ ಭರವಸೆ ನೀಡುತ್ತಾನೆ, ತಾನೂ ಸಹ ಬೆಳಿಗ್ಗೆ ಈ ಕೆಲಸ ಮಾಡುವ ಇಂಗಿತವನ್ನು ವ್ಯಕ್ತ ಪಡಿಸಿದಾಗ “ಅವಳು” ಯರಾರದ್ದೋ ಸಹಕಾರದಿಂದ ಗಂಡನಿಗೂ ರಸ್ತೆ ಸ್ವಚ್ಛ ಮಾಡುವ ಕೆಲಸ ಕೊಡಿಸುತ್ತಾಳೆ. ಇನ್ನೇನು ಸುಖ ಸಂಸಾರ ಕುಡಿತವನ್ನು ಬಿಟ್ಟ ಗಂಡ ಹೆಂಡತಿ ಮಕ್ಕಳೊಂದಿಗೆ ಸಂತೋಷವಾಗಿ ಬದುಕುತ್ತಾರೆ.      

                  ಹೀಗೆ ಜೀವನ ಸಾಗಿಸುತ್ತಿರುವ ಅವಳ ಬದುಕಲ್ಲಿ ಮತ್ತೆ ಬಿರುಗಾಳಿಯಂತೆ ಸಮಸ್ಯೆಯೊಂದು ಬರುತ್ತದೆ, ತಾನು ಮತ್ತು ತನ್ನ ಗಂಡ ಅನದಿಕೃತವಾಗಿ ಮಾಡುತ್ತಿದ್ದ ನಗರಸಭೆಯ ಕೆಲಸಕ್ಕೆ ಕತ್ತರಿ ಬೀಳುವ ಸಂಭವ, ಸಮಾಜ ಸೇವಕಿಯೋಬ್ಬರು (ಕಥಾ ನಾಯಕಿ) ನಗರಸಭೆಯ ನಕಲಿ ಹಾಜರಾತಿಗಳ ಕುರಿತು ದೂರನ್ನು ಸಲ್ಲಿಸಿರುವ ಪ್ರಯುಕ್ತ ಅಸಲಿ ಕೆಲಸಗಾರರು ಕೆಲಸಕ್ಕೆ ಹಾಜರಾಗಿದ್ದ ಕಾರಣ “ಅವಳ” ಬದುಕಲ್ಲಿ ಕೆಲಸ ಇಲ್ಲದಾಯಿತು, ಸಮಾಜ ಸೇವಕಿಯನ್ನು ಭೇಟಿಯಾದ “ಅವಳು” ತನ್ನ ಕಷ್ಟವನ್ನು ಹೇಳಿಕೊಳ್ಳುತ್ತಾಳೆ, ಅವಳ ಹಾಗೆ ಕೆಲಸ ಮಾಡುವ ಎಷ್ಟೋ ಕೆಲಸಗಾರರ ನೋವಿನ ಸಂಗತಿಯನ್ನು ತಿಳಿದ ಸಮಾಜ ಸೇವಕಿ ಇದರ ಬಗ್ಗೆ ಹೋರಾಟ ಮಾಡುವ ಹಾಗೂ ನಿಮಗೆ ನಗರಸಭೆಯ ಕೆಲಸ ಕೊಡಿಸುವ ಭರವಸೆಯನ್ನು ನಿಡುತ್ತಾಳೆ. ಸಮಾಜ ಸೇವಕಿಯ ಮತ್ತೊಂದು ಹೋರಾಟ ಆರಂಭವಾಗುತ್ತದೆ.     

 (ಅಮ್ಮನ ಮನೆ ಉದ್ಘಾಟನೆಯ ಸಮಯದಲ್ಲಿ  ಉದ್ಘಾಟನೆಯ ಅತಿತಿಯಾಗಿ ಆಗಮಿಸಿದ ಸಮಾಜ ಸೇವಕಿ ಅದೇ ಸಮಾರಂಭದ ಅಧ್ಯಕ್ಷತೆ ವಹಿಸಿ ಬಂದ ನೂತನ ಜಿಲ್ಲಾಧಿಕಾರಿಗಳ ಸಮ್ಮುಖ ಈಗಾಗಲೇ ತಾನು ಹೋರಾಟ ಮಾಡುತ್ತಿರುವ ವಿಷಯಗಳ ಕುರಿತು ತಿಳಿಸಿ ಅದರ ಆದಾರಗಳನ್ನು ನಿಡಿದಾಗ, ಉದ್ಘಾಟನೆಯ ಸಮಯದಲ್ಲಿಯೇ ನಕಲಿ ಹಾಜರಾತಿಯ ಕಾರ್ಯಕ್ಕೆ ಸಹಕರಿಸಿದ ಅಧಿಕಾರಿಗಳನ್ನು ಹಾಗೂ ನಕಲಿ ಹಾಜರಾತಿ ನೀಡಿ ಸರಕಾರಕ್ಕೆ ಮೋಸ ಮಾಡಿದವರನ್ನು ಅಮಾನತ್ತು ಮಾಡುವುದಾಯಿಯೂ, ನಿಯವಾಗಿಯೂ ನಗರ ಸ್ವಚ್ಚತೆಗೆ ಶ್ರಮಿಸಿದವರನ್ನು ಖಾಯಂ ಕೆಲಸಕ್ಕೆ ನೇಮಿಸುವ ಭರವಸೆಯನ್ನು ನೀಡುತ್ತಾರೆ ಎಂಬ ವಿಷಯಗಳು ಕ್ಲೈಮಾಕ್ಸ್ ನಲ್ಲಿ ನಮೂದಿಸಲಾಗಿದೆ)

        ಮರುದಿನ ಸಾಕಷ್ಟು ಅಧಿಕಾರಿಗಳು ಹಾಗೂ ನಕಲಿ ಹಾಜರಾತಿ ಸಲ್ಲಿಸಿದ ವ್ಯಕ್ತಿಗಳು ಅಮಾನತ್ತಾಗಿ, ನಿಜವಾಗಿಯೂ ನಗರ ಸ್ವಚ್ಚಾತೆ ಮಾಡುತ್ತಿರುವ ನೂರಾರು ಕಾರ್ಮಿಕರು ನಗರಸಭೆಯ ಖಾಯಂ ಕೆಲಸಗಾರರಾಗಿ ನೇಮಕ ಮಾಡಲಾಗಿರುತ್ತದೆ)

  •               5 ನಾಯಕಿ
  • ಶಿಕ್ಷಕಿ : ನಾಯಕಿ

          ಶಿಕ್ಷಕಿಯಾಗಿ ಕಾರ್ಯ ಮಾಡುತ್ತಿರುವ “ಅವಳು” ತನ್ನ ಕೆಲಸದ ಜೊತೆ ಶಾಲೆ ಬಿಟ್ಟು ಮನೆಯಲ್ಲಿ ಕುಳಿತುಕೊಂಡಿರುವ ಮಕ್ಕಳಿಗೆ ಮತ್ತು ಅವರ ಪಾಲಕರಿಗೆ ಶಿಕ್ಷಣದ ಮಹತ್ವವನ್ನು ಸಾರಿ ಪುನಃ ಶಿಕ್ಷಣವನ್ನು ಕೊಡಿಸುವ ಸೇವೆಯನ್ನು ಸಹ ಮಾಡುತ್ತಾರೆ, ಸಂಜೆ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಉಚಿತ ವಿದ್ಯಾಬ್ಯಾಸವನ್ನು ಸಹ ನಿಡುವ ಶಿಕ್ಷಕಿಯಾಗಿದ್ದು, ಅವರ ಪ್ರಭಾವ ಎಷ್ಟಿದೆ ಎಂದೆರೆ “ಅವಳು” ದಾರಿಯಲ್ಲಿ ಹೊರಟರೆ ಯಾರೇ ಇದ್ದರೂ ಎದ್ದು ನಿಂತು ಗೌರವ ಕೊಡುವಷ್ಟರ ಮಟ್ಟಿಗೆ ಅವಳ ಪ್ರಭಾವವಿದೆ.

          ತನ್ನ ಶಿಕ್ಷಣಿಕ ಪಾಟಗಳ ಜೊತೆ ಜೊತೆಗೆ ಮಕ್ಕಳಿಗೆ ತಮ್ಮ ಸುರಕ್ಷತೆಯ ಕುರಿತು (Bad Touch Good Touch) ಉಪದೇಶವನ್ನು ನಿಡುವ ಸೇವೆಯನ್ನು ಸಹ ಮಾಡುತ್ತಿದ್ದು ಇವರ ಈ ಕಾರ್ಯವು ತುಂಬಾ ಮೆಚ್ಚಿಗೆಯ ಕಾರ್ಯವಾಗಿ ಉಳಿದ ಶಾಲೆಗಳು ಸಹ ಇವರನ್ನು ತಮ್ಮ ಶಾಲೆಯ ಮಕ್ಕಳಿಗೆ ಮಕ್ಕಳ ಸುರಕ್ಷತೆಯ ಬಗ್ಗೆ ಭೋದನೆ ಹೇಳಲು ಕರೆಯಿಸುತ್ತಾರೆ.

          ಹೀಗೆ ಶಿಕ್ಷಕಿಯ ಬದುಕು ನಡೆಯುತ್ತಿರುವಾಗ ಅವಳ ಕಣ್ಣಿಗೆ ಕಾಣುವುದು ಒಂದು ಮುಗ್ದ ಹುಡುಗಿ, ಮಾನಸಿಕವಾಗಿ ಜರ್ಜರಿತಳಾದ ಆ  ಮಗುಗನ್ನು ನೋಡಿ ಮಗುವನ್ನು ಮಾತನಾಡಿಸಿದಾಗ ಹೆದರಿ ದೂರ ಹೋಗುತ್ತದೆ ಮಗು, ದಿನಂಪ್ರತಿ ಆ ಮಗುವನ್ನು ಮಾತನಾಡಿಸಿ, ಮಗುವಿನ ಪಾಲಕರಿಗೆ ವಿಷಯ ತಿಳಿಸಿ ನಂತರ ಮಗುವಿನ ಪ್ರೀತಿ ಗಳಿಸಿದ ಶಿಕ್ಷಕಿ ಮಗುವಿಗೆ ಆದ ನೋವಿನ ಸಂಗತಿಯನ್ನು ತಿಳಿದುಕೊಂಡು ವ್ಯಾಗ್ರಳಾಗುತ್ತಾಳೆ,  ವಿಷಯ ತಿಳಿದ ಮಗುವಿನ ತಂದೆ ತಾಯಿಗಳು ಸಹ ದುಖ್ಹಿತರಾಗಿ ಮಗುವನ್ನು ಶಾಲೆಗೇ ಕಳುಹಿಸಲು ಹಿಂಹರಿಯುತ್ತಾರೆ, ಪಾಲಕರಿಗೆ ಧೈರ್ಯ ಹೇಳಿ ಮಗುವಿನ ಜೊತೆ ಚಲ್ಲಾಟವಾಡಿದ ಆ ದುಷ್ಟರಿಗೆ ಶಿಕ್ಷೆ ಕೊಡಿಸುವ ಭರವಸೆಯನ್ನು ನಿದುತ್ತಾಳೆ “ಅವಳು”

          ಮಗು ಕಲಿಯುತ್ತಿರುವ ಶಾಲೆ ಹತ್ತಿರದಲ್ಲಿಯೇ ಇರುವ ಸರಾಯಿ ಅಂಗಡಿ, ಅಸುರಕ್ಷತೆಯಲ್ಲಿರುವ ಶಾಲಾ ವಠಾರ, ಯಾರಾರೋ ಶಾಲಾ ಮೈದಾನ ಪ್ರವೇಶಿಸುವ ಇಂತಹ ವಾತಾವರಣದ ಕುರಿತು ಅಧಿಕಾರಿಗಳ ಗಮನಕ್ಕೆ ತರುವ ಶಿಕ್ಷಕಿ ಹನ್ನೆರಡು ವರ್ಷದ ಮಗುವಿನ  ಮೇಲೆ ಅತ್ಯಾಚಾರವಾಗಿರುವ ಕುರಿತು ಪೋಲಿಸ್ ಅಧಿಕಾರಿಗಳಿಗೆ ದೂರು ಸಲ್ಲಿಸುತ್ತಾರೆ.

          ಪೊಲೀಸರಿಗೆ ದೂರು ಸಲ್ಲಿಸಿದ ತರುವಾಯ ಮಗುವನ ಮೇಲೆ ಅತ್ಯಾಚಾರ ಮಾಡಿದ ತಂಡ ವಿಷಯ ತಿಳಿದು ಶಿಕ್ಷಕಿಯನ್ನು ಕೊಲ್ಲುವ ಬಗ್ಗೆ ಮಾತಾಡಿಕೊಂಡು ಶಿಕ್ಷಕಿಯ ಕೊಲೆಗೆ ಸಂಚನ್ನು ರೂಪಿಸುತ್ತಾರೆ, ಪಾಪಿಗಳು ಶಿಕ್ಷಕಿಯನ್ನು ಅಪಹರಿಸುವ ಸಮಯದಲ್ಲಿ ಅದನ್ನು ನೋಡಿದ ವೈಶ್ಯೆ (ಕಥಾ ನಾಯಕಿ) ತನ್ನವರ ಸಹಾಯದಿಂದ ಶಿಕ್ಷಕಿಯನ್ನು ಪಾರು ಮಾಡುತ್ತಾಳೆ. ಹಾಗೂ ಶಿಕ್ಷಕಿಯಿಂದ ವಿಷಯ ತಿಳಿದುಕೊಳ್ಳುತ್ತಾಳೆ.

          ಮುಂದಿನ ಎರಡೇ ದಿನಗಳಲ್ಲಿ ಮಗುವಿನ ಮೇಲೆ ಅತ್ಯಾಚಾರ ಮಾಡಿದ ಆ ನಾಲ್ಕು ಪಾಪಿಗಳು ಕೊಲೆಯಾಗಿರುತ್ತಾರೆ, ಅ ನಾಲ್ಕು ಹೆಣಗಳನ್ನು ನೋಡಿ ನಿಟ್ಟುಸಿರು ಬಿಟ್ಟ ಶಿಕ್ಷಕಿ ಮಗುವಿನ ಪಾಲಕರಿಗೆ ಪಾಪಿಗಳು ಸತ್ತು ಹೋಗಿರುವ ವಿಷಯ ತಿಳಿಸಿ ಧೈರ್ಯ ನಿಡುತ್ತಾಳೆ.

          ಮುಂದೆ ಯಥಾಪ್ರಕಾರ ತನ್ನ ಕಾರ್ಯವನ್ನು ಮುಂದುವರೆಸುತ್ತಾಳೆ “ಅವಳು”  ನಾಲ್ಕು ಜನ ಕೊಲೆಯಾದ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದು ಶಿಕ್ಷಕಿಯ ಮೇಲೂ ಪೊಲೀಸರಿಗೆ ಸಂಶಯ ಬಂದು ವಿಚಾರಣೆಗೆ ಕರೆಯುತ್ತಾರೆ, ಪೋಲಿಸ್ ವಿಚಾರಣೆಯ ಸಮಯದಲ್ಲಿ ಸಮಾಜ ಸೇವಕಿ (ಕಥಾ ನಾಯಕಿ) ಪೋಲೀಸರ ಈ ಕಾರ್ಯಕ್ಕೂ ವಿರೋಧ ವ್ಯಕ್ತ ಪಡಿಸುತ್ತಾ, ನಿಜವಾದ ಕೊಲೆಗಾರರನ್ನು ಭಂದಿಸುವ ಬದಲು ತಾವು ಅಮಾಯಕರ ಮೇಲೆ ದರ್ಪ ತೋರಿಸುತ್ತಿರುವ ಬಗ್ಗೆ ಹೋರಾಟ ಮಾಡುತ್ತಾರೆ,

          ಶಿಕ್ಷಕಿ ತನ್ನ ಕಾರ್ಯದಲ್ಲಿ ಮುಂದುವರೆಯುತ್ತಾರೆ, ಶಿಕ್ಷಕಿಯ ಕಾರ್ಯಕ್ಕೆ ಮೆಚ್ಚಿ ಸರಕಾರ ಶಿಕ್ಷಕಿಗೆ ರಾಜ್ಯ ಪ್ರಶಸಿಯನ್ನು ನೀಡುತ್ತದೆ, ಅಮ್ಮನ ಮನೆ ಉದ್ಘಾಟನೆಯ ಮತ್ತೋರ್ವ ಅತಿತಿಗಳಾಗಿ ಶಿಕ್ಷಕಿ ಆಗಮಿಸುತ್ತಾರೆ.

ಕ್ಲೈಮಾಕ್ಸ್

“ಅಮ್ಮನ ಮನೆ”

ಉದ್ಘಾಟನಾ ಸಮಾರಂಭ

          ಮೋಸದ ಪ್ರೀತಿಗೆ ಬಲಿಯಾಗಿ ತನ್ನ ಶಿಲವನ್ನು ಕಳೆದುಕೊಂಡು, ಪ್ರೀತಿಸಿದ ಹುಡುಗನಿಂದ ತನ ಅಶ್ಲೀಲ ವಿಡಿಯೋಗಳು ಬಹಿರಂಗವಾಗಿ ಮಾರ್ಯಾದೆ ಕಳೆದುಕೊಂಡು, ಮೋಸದ ಪ್ರೀತಿಗೆ ಅಪ್ಪನನ್ನು ಕಳೆದುಕೊಂಡು, ಪ್ರೀತಿಯ ನಾಟಕದಲ್ಲಿ ಅಮ್ಮನಿಂದ ದೂರವಾಗಿ ಕೊನೆಗೆ ಸಾಯಲು ಹೊರಟಾಗ ತನ್ನನ್ನು ಬದುಕಿಸಿ ಜ್ಞಾನದ ಬೆಳಕಲ್ಲಿ ನಡೆಸಿದ ಒಬ್ಬ ವೈಶ್ಯೆ ತನ್ನ ಎರಡನೆಯ ತಾಯಿ.

          ತಾನು ಮಾಡಿದ ಕರ್ಮಕ್ಕೆ ನನ್ನ ಬಿಟ್ಟು ಅಲೆಯುತ್ತಿರುವ ತಾಯಿ ಸಿಗಲೇ ಇಲ್ಲ, ತಾಯಿಯನ್ನು ಹುಡುಕಿ ಸಾಕಾದ “ಅವಳು” ಹೀಗೆ ಮಕ್ಕಳಿಂದ ದೂರವಾದ ಎಲ್ಲಾ ತಾಯಂದಿರನ್ನು ನೋಡಿಕೊಳ್ಳಲು ಕಟ್ಟಿದ “ಅಮ್ಮನ ಮನೆ” ಇಂದು ತನ್ನ ಅಮ್ಮನ ಪಾದಾರವಿಂದಗಳಿಗೆ ಅರ್ಪಿಸುತ್ತ ತನ್ನನ್ನು ಬದುಕಿಸಿ ಜ್ಞಾನದ ಬೆಳಕಲ್ಲಿ ನಡೆಸಿದ “ವೈಶ್ಯೆ” ತನ್ನ ಪಾಲಿನ ದೇವತೆ

          ಇದೆ ಅಮ್ಮನ ಮನೆಯ ಉದ್ಘಾಟನೆಗೆ ಅತಿಥಿಗಳಾಗಿ ಅಮಾಜ ಸೇವಕಿ ಹಾಗೂ ಶಿಕ್ಷಕಿಯರನ್ನೂ ಸಹ ಆಹ್ವಾನಿಸಿದ್ದಾಳೆ “ಅವಳು”  ಅದೇ ನಗರಕ್ಕೆ ಜಿಲ್ಲಾಧಿಕಾರಿಯಾಗಿ ಆಗಮಿಸಿದ “ವೈಶ್ಯೆಯ” ಮಗಳು ಅದ್ಯಕ್ಷತೆಯನ್ನು ವಹಿಸಿ ಉದ್ಘಾಟನೆಯನ್ನು ನೆರವೇರಿಸಲಿದ್ದು ಜಿಲಾಧಿಕಾರಿ ವೈಶ್ಯೆಯ ಮಗಳು ಎಂಬ ಸತ್ಯ ಯಾರಿಗೂ ತಿಳಿದಿಲ್ಲ.

          ಅಮ್ಮನ ಮನೆ ಉದ್ಘಾಟನೆಯ ವೇಳೆ ಭಾಷಣ ಮಾಡುತ್ತಿರುವ ಜಿಲ್ಲಾಧಿಕಾರಿಗಳು ಮೊದಲು ಹೇಳಿದ ಮಾತುಗಳೇ ತಾನೊಬ್ಬ ವೈಶ್ಯೆಯ ಮಗಳು

          ಜಿಲ್ಲಾಧಿಕಾರಿಯೊಬ್ಬ  ವೈಶ್ಯೆಯ ಮಗಳು ಎಂದು ತಿಳಿದು ನೆರೆದ ಜನರೆಲ್ಲಾ ಏನೇನೋ ಆಡಿಕೊಳ್ಳಲು ಆರಂಬಿಸಿದಾಗ  ಮತ್ತೆ ಜಿಲಾಧಿಕಾರಿಗಳು ಮಾತನಾಡಲು ಆರಂಬಿಸಿ ಹೇಳಿದ ಮಾತು ಆದರೆ ನನ್ನ ಅಮ್ಮ ವೈಶ್ಯೆಯಲ್ಲ ಅವಳು ಮಹಾ ತಾಯಿ…………………….. ಈ ಸಮಾಜ, ಸಮಾಜದ ಕಾಮುಖ ವ್ಯಕ್ತಿಗಳು, ಪುರುಷ ಪ್ರಧಾನ ಸಮಾಜದ ಕೆಲವು ಕಟ್ಟಲೆಗಳು ಹೆಣ್ಣನ್ನು ಹೊಲೆ ಮಾಡುತ್ತದೆ ಆದರೆ ಆ ಹೊಲೆ ಎಂಬುದು ಹೆಣ್ಣಲ್ಲ ಈ ಸಮಾಜ,, ಜಿಲ್ಲಾಧಿಕಾರಿಗಳ ಮಾತನ್ನು ಕೇಳುತ್ತಿರುವ ಜನಸ್ತೋಮ ನಿಶಬ್ದವಾಗಿ ಹೋದ ಸಮಯದಲ್ಲಿಯೇ.. ಜಿಲಾಧಿಕಾರಿಗಳು ಕೆಳಗಿಳಿದು ಜನರ ಮದ್ಯ ಕುಳಿತ ತನ್ನ ತಾಯಿಯನ್ನು ವೇದಿಕೆಗೆ ಕರೆದುಕೊಂಡು ಬಂದು ನಮಸ್ಕರಿಸುತ್ತ ಅಮ್ಮ ಇಂದು ನಾನು ಜಿಲಾಧಿಕಾರಿಯಾಗಿ ಬಂದಿದ್ದೇನೆ. ಹಣ್ಣಿಗೆ ಅಂಟಿದ ಕಳಂಕವನ್ನು ತೊಳೆಯಲು ನನಗೆ ನಿನ್ನ ಆಶೀರ್ವಾದ ಬೇಕು ಬಾ ನನ್ನನ್ನು ಹರಸು ಎಂದು  ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ,  ವೈಶ್ಯೆ ವೇದಿಕೆಗೆ ಬರುತ್ತಿದ್ದಂತೆಯೇ ನೆರೆದ ಜನರೆಲ್ಲಾ ತಮ್ಮ ಕೈಗಳನ್ನು ಮೇಲೆತ್ತಿ ಮುಗಿದು ನಮಸ್ಕರಿಸುತ್ತಾರೆ.

          ಅಮ್ಮನ ಮನೆ ಸ್ಥಾಪಿಸಿದ ಅವಳು ಸಹ ಧಿಗ್ಬ್ರಮೆಗೊಳ್ಳುತ್ತಾಳೆ ಇವರೇನಾ ಜಿಲ್ಲಾಧಿಕಾರಿಗಳ ಅಮ್ಮ… ಅಮ್ಮನ ಮನೆ ಸ್ಥಾಪನೆಗೂ ಅಮ್ಮನೇ ಸ್ಫೂರ್ತಿ ಎಂದು ತಿಳಿದ ಮಗಳು ಮತ್ತಷ್ಟು ಸಂತೋಷಗೊಳ್ಳುತ್ತಾಳೆ, ತನಿಖೆ ಮಾಡುತ್ತಾ ವೈಶ್ಯೆನ್ನು ಭಂಡಿಸಬೇಕು ಎಂದು ಕಾದಿದ್ದ ಪೋಲಿಸ್ ಅಧಿಕಾರಿಯೂ ಜಿಲ್ಲಾಧಿಕಾರಿಗಳ ರಕ್ಷಣೆಗೆ ಬಂದಿರುತ್ತಾರೆ, ವೇದಿಕೆಗೆ ಆಗಮಿಸಿದ ಪೋಲಿಸ್ ಅಧಿಕಾರಿಯೂ ಸಹ ವೈಶ್ಯೆಯನ್ನು ನಮಸ್ಕರಿಸ್ಯುತ್ತ  ಅಮ್ಮ ಇಂದಿನಿಂದ ನಾನೂ ನಿಮ್ಮನ್ನ ಅಮ್ಮ ಎಂದು ಕರೆಯಬಹುದೇ ಎಂದು ಅಂಗಲಾಚುತ್ತಾಳೆ, ಪೋಲಿಸ್ ಅಧಿಕಾರಿಯನ್ನು ತಬ್ಬಿಕೊಂಡ ವೈಶ್ಯೆ ಒಬ್ಬ ಮಗಳು ಜಿಲ್ಲಾಧಿಕಾರಿ ಮತ್ತೊಬ್ಬ ಮಗಳು ಪೋಲಿಸ್ ಅಧಿಕಾರಿ ಇನ್ನು ಈ ಸಮಾಜದಲ್ಲಿ ಕಾಮುಕರಿಗೆ ಉಳಿಗಾಳವಿಲ್ಲ ಎಂದು ಹೆಮ್ಮೆ ಪಡುತ್ತಾಳೆ ಅದೇ ಸಮಯಕ್ಕೆ ಅಲ್ಲಿಗೆ ಬಂದ ಅಮ್ಮನ ಮನೆ ಸ್ಥಾಪಿಸಿದ “ಅವಳು” ಇಬ್ಬರಿಗೂ ನೀವು ಕೇವಲ ಅಮ್ಮ ಆದರೆ ನನಗೆ ಮಾತ್ರ ದೇವರು ಈ ದೇವರು ಅಮ್ಮನ ಮನೆಯಲ್ಲಿದ್ದರೆ ಸಮಾಜದಲ್ಲಿ ಮತ್ತೆ ಯಾವ ತಾಯಿಯೂ ವೈಶ್ಯೆ ಆಗುವುದಿಲ್ಲ ಎಂದು ಹೇಳುತ್ತಾ ಅಮ್ಮನ ಮನೆಯ ಜವಾಬ್ದಾರಿಯನ್ನು ವೈಶ್ಯೆಗೆ ವಹಿಸುತ್ತಾಳೆ “ಅವಳು”

          ಅಮ್ಮ ನನ್ನನ್ನು ಕ್ಷಮಿಸು ಮೋಸದ ಪ್ರೀತಿಗೆ ಒಳಗಾಗಿ ನಾನು ನಿಮ್ಮನ್ನು ತುಂಬಾ ನೋಯಿಸಿದೆ ಇನ್ನು ಯಾವ ತಾಯಿಗೂ ನೋವಾಗದ ಹಾಗೆ ನಡೆದುಕೊಳ್ಳುತ್ತೇವೆ ನನ್ನನ್ನು ಕ್ಷಮಿಸು ಅಮ್ಮ ಎಂದು ಕಣ್ಣಿರು ಹಾಕುವಾಗ ದೂರದಲ್ಲಿ ನಿಂತು ನೋಡುತ್ತಿದ್ದ ಅಮ್ಮ ಕೈಗಳನ್ನು ಮೇಲಕ್ಕೆ ಎತ್ತಿ ಹರಸುತ್ತ ಮಗಳ ಮುಂದೆ ಬಂದು ಮಗಳೇ ನನ್ನ ಮನೆಗೆ ಬರಲಾ…..  ಅಮ್ಮನ ಕಾಲಿಗೆ ಬಿದ್ದ ಮಗಳು ಬಿಕ್ಕಿ ಬಿಕ್ಕಿ ಅಳುತ್ತಾಳೆ.  

          ಭಾಷಣ ಆರಂಬಿಸಿದ ಜಿಲ್ಲಾಧಿಕಾರಿಗಳು ಜನರೊಂದಿಗೆ ಮಾತನಾಡುತ್ತ, ಜಿಲ್ಲೆಯಲ್ಲಿ ಯಾವ ದುಷ್ಟರು ಸ್ವತಂತ್ರವಾಗಿ ಬದುಕಬಾರದು ಎಲ್ಲಾ ಶಾಲಾ ಕಾಲೇಜುಗಳು ಮಕ್ಕಳಿಗೆ ಸುರಕ್ಷತೆಯ ತಾಣವಾಗುವ ಹಾಗೆ ಕ್ರಮ ಕೈಗೊಳ್ಳಲು ಪೋಲಿಸ್ ಅಧಿಕಾರಿಗೆ ಹೇಳುತ್ತಾ,  ಸಮಾಜ ಸೇವಕಿಯತ್ತ ತಿರುಗಿ ನಕಲಿ ಹಾಜರಾತಿಯ ಕಾರ್ಯಕ್ಕೆ ಸಹಕರಿಸಿದ ಅಧಿಕಾರಿಗಳನ್ನು ಹಾಗೂ ನಕಲಿ ಹಾಜರಾತಿ ನೀಡಿ ಸರಕಾರಕ್ಕೆ ಮೋಸ ಮಾಡಿದವರನ್ನು ಅಮಾನತ್ತು ಮಾಡುವುದಾಯಿಯೂ, ನಿಯವಾಗಿಯೂ ನಗರ ಸ್ವಚ್ಚತೆಗೆ ಶ್ರಮಿಸಿದವರನ್ನು ಖಾಯಂ ಕೆಲಸಕ್ಕೆ ನೇಮಿಸುವ ಭರವಸೆಯನ್ನು ನೀಡುತ್ತೇನೆ ಎಂದು ಹೇಳುತ್ತಾ ಜನರೆಲ್ಲರಿಗೂ ನಮಸ್ಕರಿಸಿ ಹೊರಡುವಾಗ, ಅಲ್ಲಿಗೆ ಧಾವಿಸಿ ಬಂದ ಬಡ ಮಹಿಳೆ ಮತ್ತು ಅವಳ ಗಂಡ ಮಕ್ಕಳು   ಜಿಲಾಧಿಕಾರಿಗಳ ಕಾಲಿಗೆ ಬಿದ್ದು ನಮಸ್ಕರಿಸುವಾಗ ಹಿಂದೆ ಸರಿದ ಜಿಲ್ಲಾಧಿಕಾರಿಗಳು ಹಾಗೆಲ್ಲ ಕಾಲಿಗೆ ಬೀಳಬಾರದು, ಯಾರು ನೀವು ಏನಾಗಬೇಕಿತ್ತು ಎಂದು ಕೇಳುವಾಗ ಮದ್ಯ ಪ್ರವೇಶ ಮಾಡಿದ ಸಮಾಜ ಸೇವಕಿ ಅವರು ನಗರ ಸ್ವಚ್ಚ ಮಾಡುವ ನಿಜವಾದ ಶ್ರಮಿಕರು ಎಂದು ಪರಿಚಯಿಸುತ್ತಾ ಬಡ ಮಹಿಳೆಯ ಜಾಣ ಮಕ್ಕಳ ಕುರಿತಾಗಿಯೂ ಪರಿಚಯಿಸಿದಾಗ ಜಿಲಾಧಿಕಾರಿಗಳು ಮಕ್ಕಳ ತಲೆ ಮೇಲೆ ಕೈ ಆಡಿಸುತ್ತಾ ನೀವು ಎಷ್ಟೇ ಕಲಿತರು ಅದರ ಜವಾಬ್ದಾರಿ ಮತ್ತು ನಿಮ್ಮ ಶಿಕ್ಷಣದ ಖರ್ಚು ಸರಕಾರ ನೋಡಿಕೊಳ್ಳುವ ಹಾಗೆ ಸರಕಾರಕ್ಕೆ ಪತ್ರ ಬರೆಯುತ್ತೇನೆ ಹಾಗೂ ಅಮ್ಮ ನಾಳೆಯಿಂದ ನೀವು ನಗರ ಸ್ವಚ್ಛವಾಗಿಡಿ ನಾವೆಲ್ಲಾ ಆರೋಗ್ಯವಾಗಿ ಬದುಕಿದ್ದೆ ನಿಮ್ಮಿಂದ ಎಂದು ಹೇಳುತ್ತಾ ಜಿಲಾಧಿಕಾರಿಗಳು ಅಮ್ಮನನ್ನು ಕರೆದುಕೊಂಡು ಹೋಗುತ್ತಾರೆ……..

                   ಸಾಮಾನ್ಯದವಳಲ್ಲ “ಅವಳು” ಮನಸ್ಸು ಮಾಡಿದರೆ ವಿಧಿ ಬರಹವನ್ನೇ ಬದಲಿಸಬಳ್ಳಲು ಕಾರಣ ಅವಳೆಂದರೆ ಕೇವಲ ಅವಳಲ್ಲ “ಅವಳು” ಒಂದು ಮಹಾ ಶಕ್ತಿ…..    

ಚಿತ್ರ ನಿರ್ಮಾಣ ಸಂಸ್ಥೆ

ಕಾರಭಾರಿ ಮೊಷನ್ಸ್ ಕೋ ಆಪರೇಟಿವ್ ಫಿಲಂ ಸೊಸೈಟಿ

Picsart_24-07-13_11-14-05-609-removebg-preview.pngPicsart_24-10-07_22-12-21-242-removebg-preview.pngpng.pngPicsart_24-09-13_18-21-10-738-removebg-preview.pngPicsart_25-01-04_21-58-29-275-removebg-preview.pngಕಾರಭಾರಿ ಸಿನಿ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್

ಕಥೆ / ಚಿತ್ರಕಥೆ / ಸಂಭಾಷಣೆ / ನಿರ್ದೇಶನ  

ಶ್ರೀಮತಿ ಮೇರಿ ರಾದೇ ಕಾರಭಾರಿ

ಸಹಕಾರ

ರಾ ದೇ ಕಾರಭಾರಿ

ಅವಳು ಚಿತ್ರದ BUDJET ESTIMATE

ಕಾರಭಾರಿ ಚಿತ್ರ ನಿರ್ಮಾಣ ಸಂಸ್ಥೆ

ಕಾರಭಾರಿ ಮೊಷನ್ಸ್ ಕೋ ಆಪರೇಟಿವ್ ಫಿಲಂ ಚೇಂಬರ್ ಅಸೋಷಿಯೇಶನ್  

ಆಲ್ ಇಂಡಿಯಾ ಕೊಲಾಬ್ರೆಟಿವ್ ಸಿನಿ ಮೇಕರ್ಸ್ ಫಿಲಂ ಬೋರ್ಡ್ ಕೌನ್ಸಿಲ್ ಟ್ರಸ್ಟ್

Picsart_24-07-13_11-14-05-609-removebg-preview.pngPicsart_24-10-07_22-12-21-242-removebg-preview.png Picsart_25-01-04_21-58-29-275-removebg-preview.png png.pngPicsart_24-09-13_18-21-10-738-removebg-preview.pngಕಾರಭಾರಿ ಸಿನಿ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್

PROJECT“APPUTAXI” AVALU ESTIMATED BUDGET 2.50CR Contact: Raa Dea Karabhari :  7760433113
S NOParticularsAmt.(CR.)
1Artist(Excluding Heroein and All Co Artist)40,00,000
2Technicians35,00.000
Dirctor / DOP / Ediotor / Art director / Costume Designer / Asst.Dirs/Still&making/Productionteam.(EP+LP+Accounts) Producerfees/TechnicalRecca&Research
3Story/ScreenPlay/DialogueExp./Pre-ProductionsScriptwork02,00,000
4Music & BGM12,00,000
5Set Design, Locations Rent. Properties & Costumes07,00,000
6Stuntand Special Fx Shoot (5 Days included 40 in Shooting Days)05,00,000
7Acting Workshop, Stunt Choreography and Practice02,00,000
7Choreographed 4 Song Squennce (6Daysincludedin 40 Shooting Days)06,00,000
8Special Equipment For Special Exicutional Scences14,00,000
ProbeLens / Under water Rig / MacroLens / Rope Camera / Droneor Arial Camera / Arri Trinity / 360 Degree Head  / Bolt Camera Rig / Till Shift Lens
7Shooting Exp-(80thousand to1,20 Lacsaverage 40 days) (60-70 Crew)48,00,000
9VFx10,00,000
10Post Production Dubbing / Editingstudion / foley / premix / FinalMaxing /DI / PostAD & Others15,00,000
11Administration & Insurance Charges02,00,000
124 Languages Dubbing Cost20,00,000
13Miscellaneous Expense02,00.000
 Total Amount 
 Total Estimated Budget2,00,00,000(2cr)
 The above estimated budget does not include Pre–release Promotion and publicity25,00,000
 Approx,Fundrequirement–2.50CrSchedule 
Approx, Fund requirement 2.50 Cr Schedule March 2025 to March 2026 Estimated Fund Flow
 Scriptworkandpre-productionwork–Casting
 TechnicalRecce,(AdvancesforHOD’s)Research.+MusicProduction
 ToFinaliseCostume/Setting/ToSignArtists,Technicians&Pre-Productionwork– Schedulingandcreationofspecialprops
 ExecutionofSetandDraftShoot+Workshop+Admistration&InsuranceCharges
 MuhurthaPressMeet MonthsForShooting+Music Process
 Music+BGM+Editing+Grading+Vfx+FinalAudioworks
 CensorandMovieCompletedPressMeet
 PromotionsTrailerandLyricalVideoLanchFreeReliesEvent
 MovieRelies

Regards                                                                                                                       Raa Dea Karabhari

ಸಂಸ್ಥೆಯ ರಾಷ್ಟ್ರೀಯ ಕಚೇರಿ : ಅಶೋಕ ರಸ್ತೆ, ಹೆಲ್ತ್ ಕ್ಯಾಂಪ್, ಬೆಟಗೇರಿ ಗದಗ, ಕರ್ನಾಟಕ ಮೊಬೈಲ್ :7760433113 / nationalfilmchamber@gmail.com

TAGS

No Responses

Leave a Reply

Your email address will not be published. Required fields are marked *